ಅಕ್ಕ Leela Appaji ಅವರ ಪುಸ್ತಕ ಬಿಡುಗಡೆಯಾಯಿತು ಎಂದು ತಿಳಿದ ಮೇಲೆ ತರುವವರೆಗೂ ಸಮಾಧಾನವಿರಲಿಲ್ಲ. ಇಂದು Ankita Pustaka ಕ್ಕೆ ಹೋಗಿ ತಂದೆ. ಅದೆಂಥಹ ಅದ್ಭುತ ಚಿತ್ರಗಳು! ಅವರ ಪರಿಕಲ್ಪನೆಯೂ ಅದ್ಭುತವೇ, ಅದರೆ ಅವನ್ನು ನಾವು ಫೇಸ್ಬುಕ್ ನಲ್ಲಿ ನೋಡಿದ್ದೆವು. ಆದರೆ ಈಗ ಪುಸ್ತಕ ರೂಪದಲ್ಲಿ ಹೃದಯಕ್ಕೆ ಹತ್ತಿರವಿಟ್ಟುಕೊಂಡು ನೋಡುವುದು ಅದೆಂತಹ ಸುಖ!
ಸೊಗಸಾದ ಹೊಸತಂತ್ರದ ಮುಖಪುಟ, ಅಚ್ಚುಕಟ್ಟಾದ ಗಟ್ಟಿರಟ್ಟಿನ ಬೈಂಡಿಂಗ್, ಆರ್ಟ್ ಕಾಗದದಲ್ಲಿ ಮುದ್ರಣ. ಹಕ್ಕಿಗಳ ಸೌಂದರ್ಯವನ್ನು ಅಕ್ಕಾ ಮನದಲ್ಲಿ ಶಾಶ್ವತವಾಗಿ ನಿಲ್ಲುವಂತೆ “ಅರೆದು ಹುಯ್ದಿ” ದ್ದಾರೆ, ಎಷ್ಟೇ ಆದರೂ ಮೇಷ್ಟ್ರಲ್ಲವೇ!!
ಅಕ್ಕಾ ಡಾ ಲೀಲಾ ಅಪ್ಪಾಜಿಯವರಿಗೂ ಪ್ರಕಾಶಕರಾದ ವೀರಲೋಕ ಬುಕ್ಸ್ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು!
ಅಂದಹಾಗೆ, “ಈ ಪುಸ್ತಕಕ್ಕೆ ಈ ಬೆಲೆ ತೀರಾ ಕಡಿಮೆ” ಎಂದವರು ಅಂಕಿತ ಪುಸ್ತಕದ ಮಾಲಕರಾದ ಶ್ರೀ ಪ್ರಕಾಶ್ ಕಂಬತ್ತಳ್ಳಿಯವರು.
(ಬೆಲೆ ರೂ ೫೯೫. ಆದರೂ ಈ ಮಟ್ಟದ ಮುದ್ರಣ, ಆರ್ಟ್ ಕಾಗದ, ಬಣ್ಣದ ಮುದ್ರಣ ಈ ಎಲ್ಲವನ್ನೂ ಗಮನಿಸಿದಾಗ ಇದು ತೀರಾ ಕಡಿಮೆ ಬೆಲೆಯಾಗುತ್ತದೆ. ಇದಕ್ಕೂ ಸಂಬಂಧಿಸಿದ ಎಲ್ಲರಿಗೂ ಕೃತಜ್ಞ).
ಇದು ಹಕ್ಕಿಗಳ ಅಟೆಂಡೆನ್ಸ್ ಎಂಬ ವಿಶಿಷ್ಟ ಕಲ್ಪನೆಯ ಪುಸ್ತಕ (ಚಿತ್ರ ನೋಡಿ). ಕನ್ನಡಿಗರು ಇಂತಹ ಪರಿಯೋಜನೆಯನ್ನು ಸೋಲಲು ಬಿಡಬಾರದು.
– ಕಲ್ಗುಂಡಿ ನವೀನ್