ವೀರಲೋಕ ಬುಕ್ಸ್ ವತಿಯಿಂದ ಹೊಸ ವರ್ಷವನ್ನು ಪುಸ್ತಕಗಳೊಟ್ಟಿಗೆ ಸ್ವಾಗತಿಸಲು ಡಿಸೆಂಬರ್ 31ರ ರಾತ್ರಿ ‘ಸಾಹಿತ್ಯ ಬಂಧನ’ ಎಂಬ ವಿಭಿನ್ನವಾದ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತನಾಮರಿಂದ ಗೀತಗಾಯನ, ಮಂತ್ರ ಮುಚ್ಚಾಲೆ, ಹಾಸ್ಯರಾತ್ರಿ, ಕೌಟುಂಬಿಕ ಸಮಯ, ಸಾಹಿತ್ಯ ಸಂಜೆ, ಸುಗ್ರಾಸ ಭೋಜನ, ಪುಸ್ತಕ ಬಿಡುಗಡೆ-ಸಂವಾದ ಇನ್ನೂ ಮತ್ತಷ್ಟು ಕಾರ್ಯಕ್ರಮಗಳು ಆ ರಾತ್ರಿ ಜರುಗಲಿವೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇನ್ನೂರು ಜನರಿಗೆ ಮಾತ್ರ ಅವಕಾಶವಿರುವುದರಿಂದ ಟಿಕೇಟ್ ಬುಕ್ ಮಾಡಿಕೊಳ್ಳಬೇಕು.
ಒಬ್ಬರಿಗೆ ರೂ. 1,500/- ಮತ್ತು ಇಬ್ಬರಿಗೆ ರೂ. 2,500/- ಟಿಕೇಟ್ ಮೌಲ್ಯವಿರುತ್ತದೆ. ಇದರಲ್ಲಿ ರೂ. 500/- ಮೌಲ್ಯದ ಪುಸ್ತಕಗಳನ್ನು ಉಡುಗೊರೆ ರೂಪದಲ್ಲಿ ನೀಡಲಾಗುತ್ತದೆ. ಆಸಕ್ತರು 7022122121, 8861212172 ನಂಬರಿಗೆ ಕರೆ/ವಾಟ್ಸಾಪ್ ಮಾಡುವ ಮೂಲಕ ಟಿಕೇಟ್ ಖರೀದಿಸಬಹದು.
ಹೆಚ್ಚಿನ ಮಾಹಿತಿಗಳಿಗಾಗಿ www.veeralokabooks.com ಗೆ ಭೇಟಿ ನೀಡಬಹುದು.