ನಮ್ಮ ಸುತ್ತಲ ಹಾಸ್ಯ..!
ಮೊನ್ನೆ ಭದ್ರಾವತಿಗೆ ಹೋಗಿದ್ದಾಗ ಗೆಳೆಯ ದಶರಥ ಸಿಕ್ಕಿದ್ದ. ಹೀಗೆ ಕುಶಲೋಪರಿ ಮಾತನಾಡುತ್ತಿದ್ದಾಗ “ಪತ್ರಿಕೆಯಲ್ಲಿ ಬರೆಯುತ್ತಿರುವ ವ್ಯಂಗ್ಯಚಿತ್ರ ನೋಡುತ್ತಿರುತ್ತೇನೆ. ನಮ್ಮ ಸುತ್ತ-ಮುತ್ತಲ ನಡೆಯುವ ಘಟನೆಗಳನ್ನು, ವಾಸ್ತವ ಸನ್ನಿವೇಶಗಳನ್ನು ಆಯ್ಕೆ ಮಾಡಿ ತುಂಬಾ ಚೆನ್ನಾಗಿ ಬರೆಯುತ್ತೀಯ. ಖುಷಿಯಾಯ್ತು. ನಿನಗೆ ಹಾಸ್ಯ ಅಂದರೆ ತುಂಬಾ ಇಷ್ಟ ಅಲ್ವಾ..! ನೀನೇ ತುಂಬಾ ಚೆನ್ನಾಗಿ ಜೋಕ್ಸ್...