ನೋಡಿಲ್ಲಿ ಸಂಜೆಗೂ ಸೊಕ್ಕೇರಿದೆ

ನೋಡಿಲ್ಲಿ ಸಂಜೆಗೂ ಸೊಕ್ಕೇರಿದೆ

ಚೂರು ತಿರುಗಿ ನೋಡು ಅಂಗಳದಿ ನೀನೇ ಗೀಚಿದ ನನ್ನ ಹೆಸರಿದೆ ತುಸು ಕಣ್ಣಲ್ಲಿ ಕಣ್ಣಿಟ್ಟು ಹೋಗು ಕಣ್ಣೆವೆಯ ಕೆಳಗೆ ನಿನ್ನ ನಲವಿದೆ ಕಳಚಿ ಬಿದ್ದ ಕನಸಿನೆಳೆಯಲ್ಲೂ ಬೆರೆತ ಬೆವರ ಸೌಗಂಧದ ಗಮವಿದೆ ಹಾಗೇ ಸನಿಹ ಬಂದು ಕೇಳಿಲ್ಲಿ ಎನ್ನುಸಿರ ಆಳದಿ ಒಲವ ಗುನುಗಿದೆ ಗುಲ್ಮೊಹರ್ ಬೀದಿಯಲಿ ಭುಜಕೆ ಭುಜ...

ನೋಡದಂತೇಕೆ ಹೋದೆ ಕಣ್ಣಾಲಿ  ಬಿಕ್ಕಿತು…

ನೋಡದಂತೇಕೆ ಹೋದೆ ಕಣ್ಣಾಲಿ ಬಿಕ್ಕಿತು…

ಎನ್ನುಸಿರಿಗಿಂತ ತುಸು ಹೆಚ್ಚೇ ನೀನು ನೀನದೇಕೋ ಅರಿಯಲಿಲ್ಲ ಕದ್ದು ಮುಚ್ಚಿ ನಿನ್ನನೇ ಅರಸುತಿತ್ತು ಕಣ್ಣು ಇಲ್ಯಾರೂ ತಿಳಿಯಲಿಲ್ಲ ಹೆಬ್ಬಾಗಿಲ ಬಳಿ ಚಾಚಿ ಬಿದ್ದ ಬಸಿರುಗಟ್ಟಿದ ಕನಸುಗಳ ಮೂಟೆ ನಡುಮನೆಯ ಭಾವಗಳ ಬಿತ್ತಿದೆ ನಿನ್ನ ಹಿತ್ತಿಲಲದು ಚಿಗುರಲಿಲ್ಲ ಬೆನ್ನಟ್ಟಿ ಬರುವ ಸವಿ ನೆನಪುಗಳ ನೀ ಬರುವ ದಾರಿಯಲಿ ನೆಟ್ಟೆ ಏಕಾಂಗಿ...

ಒಂದಷ್ಟು ಚುಕ್ಕಿ ತೋರಿಸಿ ಸೆರಗಲ್ಲಿ ಹುದುಗಬಾರದೇ

ಒಂದಷ್ಟು ಚುಕ್ಕಿ ತೋರಿಸಿ ಸೆರಗಲ್ಲಿ ಹುದುಗಬಾರದೇ

ಕಣ್ಣೆದುರೇ ಇದ್ದರೂ ಬೇರೆಲ್ಲೋ ನೋಡುವೆ ಕಣ್ಣಾಳಕೆ ಇಳಿಯಬಾರದೇ ಸನಿಹವೇ ಸುಳಿದರೂ ಅತಿ ದೂರ ಸರಿಯುವೆ ಒಮ್ಮೆ ಬಳಿ ಬರಬಾರದೇ ಇನ್ನೆಷ್ಟು ದಿನ ಒಂದೇ ಛಾವಣಿಯ ಕೆಳಗೂ ನಿನ್ನ ಮೊಗ ಅತ್ತ ಎನ್ನದಿತ್ತ ನಗಿಸಿ ನಲಿಸಿ ಬಳಿಸಾರಿ ಮತ್ತೇರುವಂತೆನ್ನ ಈಗಲಾದರೂ ತಬ್ಬಬಾರದೇ ಮೌನ ಹೊದ್ದ ಮನಸು ನಿನ್ನದೊಂದು ಮಾತಿಗೂ ಕಾದಿದೆ...

ಮೊಲ್ಲೆ ಕಂಪನರಸಿ ದುಂಬಿ ಝೇಂಕರಿಸುವ ಹಿತ್ತಿಲಲಿ

ನನ್ನನ್ನು ದೂರುವುದಾದರೆ ದೂರಿ ಬಿಡು ಕಂಡವರೆದುರು ದೂರಬೇಡ ದೂರವಿರಿಸುವೆಯಾದರೆ ಇರಿಸಿಬಿಡು ಎಲ್ಲರಿಂದ ದೂರ ಮಾಡಬೇಡ ಪ್ರೀತಿಸುವೆಯಾದರೆ ಧಮನಿ ಧಮನಿಗಳಲಿ ಒಲವ ಧಾರೆ ಹರಿಸು ಬಾ ನನ್ನ ಕಂಡರಾಗದಿರೆ ನಿನ್ನಲ್ಲೇ ಇರಲಿ ಜಗತ್ತಿಗೆಲ್ಲ ಡಂಗುರ ಸಾರಬೇಡ ಮೊಲ್ಲೆ ಕಂಪನರಸಿ ದುಂಬಿ ಝೇಂಕರಿಸುವ ಹಿತ್ತಿಲಲಿ ದ್ವೇಷವಿಹುದೇ ಚೂರು ನಲವಾದರೆ ಜೊತೆ ಹೆಜ್ಜೆ...

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.