ಹಿತ್ತಿಲು ಇಲ್ಲದಾಕಿಗೆ ಹಿರೇತನ ಇಲ್ಲ!
ಕೇವಲ ೭೦ ವರ್ಷಗಳ ಹಿಂದೆ ಹುಬ್ಬಳ್ಳಿ-ಗದಗ-ವಿಜಾಪೂರ- ಗೋಕಾಕ -ಕೊಪ್ಪಳ - ರಾಯಚೂರು - ಬಾಗಲಕೋಟೆಗಳಲ್ಲಿ ಹಿತ್ತಲ ಇಲ್ಲದ ಮನೆಗೆ ಕನ್ಯಾ ಕೊಡುತ್ತಿರಲಿಲ್ಲ! "ಹಿತ್ತಲ ಇಲ್ಲದಾಕಿಗೆ ಹಿರೇತನ ಇಲ್ಲಾ"...ಎಂಬ ಗಾದೆಮಾತೇ ಇತ್ತು. ಕಾರಣ; ಹೆಂಗಳೆಯರಿಗೆ ಹಿತ್ತಲು ತಲೆಹಿಕ್ಕಿಕೊಳ್ಳಲು, ವಗಿಯಾಣ ಮಾಡಲು, ಪಾತ್ರೆ ತೊಳೆಯಲು, ಹಿತ್ತಲ ಕಟ್ಟೆಮೇಲೆ ಕುಂತು ಹರಟೆ ಹೊಡೆಯಲು,...