ಬಿಗ್ ಬಾಸ್ ಮನೆ ಆಟ ಕೊನೆಯ ಹಂತಕ್ಕೆ ಲಗ್ಗೆ ಇಟ್ಟಿದೆ. ದೊಡ್ಮನೆಯಿಂದ ಆರ್ಯವರ್ಧನ್ ಗುರೂಜಿ ಹೊರಬಂದಿದ್ದಾರೆ. ಮಿಡ್ ನೈಟ್ನಲ್ಲಿ ಎಲಿಮಿನೇಟ್ ಆಗುವ ಮೂಲಕ ಗುರೂಜಿ ಆಟಕ್ಕೆ ಬ್ರೇಕ್ ಬಿದ್ದಿದೆ. ದೊಡ್ಮನೆಯಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಮದುವೆಯಾದರೆ ಡಿವೋರ್ಸ್ ಆಗುತ್ತೆ ಎಂಬ ಮಾತನ್ನ ಹೇಳಿದ್ದರು. ಇದೀಗ ಈ ಬಗ್ಗೆ ಗುರೂಜಿ ಮಾತನಾಡಿದ್ದಾರೆ.
ಬಿಗ್ ಬಾಸ್ ಸೀಸನ್ 8ರಲ್ಲಿ ಲವ್ ಬರ್ಡ್ಸ್ ಆಗಿ ದಿವ್ಯಾ ಮತ್ತು ಅರವಿಂದ್ ಕಾಣಿಸಿಕೊಂಡಿದ್ದರು. ಈ ಶೋ ಮೂಲಕ ಇಬ್ಬರ ಪ್ರೀತಿಯ ವಿಚಾರ ಇಡೀ ಕರ್ನಾಟಕಕ್ಕೆ ಪರಿಚಯವಾಗಿತ್ತು. ಹೀಗಿರುವಾಗ ದಿವ್ಯಾ ಮತ್ತು ಅರವಿಂದ್ ಮದುವೆ ಆದರೆ ಡಿವೋರ್ಸ್ ಆಗುತ್ತೆ ಎಂದು ಗುರೂಜಿ ಮಾತನಾಡಿದ್ದರು.
ಯಾವಾಗಲೂ ರಾಂಗ್ ಡೇಟ್ ಬೆಸ್ಟ್ ಫ್ರೆಂಡ್ಸ್ ಆಗುತ್ತಾರೆ. ಆದರೆ ಬೆಸ್ಟ್ ಜೋಡಿಯಾಗಿ ಬದುಕೋಕೆ ಆಗಲ್ಲ. ದಿವ್ಯಾ, ಅರವಿಂದ್ ಮದುವೆಯಾದರೆ ಡಿವೋರ್ಸ್ ಗ್ಯಾರಂಟಿ ಎಂದು ಗುರೂಜಿ ಹೇಳಿದ್ದಾರೆ.