ಪುಟ್ಟಗೌರಿ ಮದುವೆ ಧಾರವಾಹಿಯ ಮೂಲಕ ಖ್ಯಾತಿ ಘಳಿಸಿದ್ದ ನಟಿ ಸಾನ್ಯಾ ಐಯ್ಯರ್ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಫೋಟೋ ಶೂಟ್ ನಿಂದಲೇ ಸಖತ್ ಸದ್ದು ಮಾಡುತ್ತಿದ್ದಾರೆ.
ಪುಟ್ಟಗೌರಿಯಾಗಿ ಅಭಿಮಾನಿಗಳ ಮನ ಗೆದ್ದಿದ್ದ ಸಾನ್ಯಾ ಇದೀಗ ಬೋಲ್ಡ್ ಫೋಟೋ ಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗ್ತಿದ್ದಾರೆ. ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಹಾಟ್ ಪೋಟೋಗಳನ್ನು ಶೇರ್ ಮಾಡುವ ಮೂಲಕ ಸದ್ದು ಮಾಡುತ್ತಿರುವ ಇದೀಗ ಮತ್ತಷ್ಟು ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸಾನ್ಯಾ ಕಡು ನೀಲಿ ಬಣ್ಣದ ಡ್ರೆಸ್ ಧರಿಸಿ ಸಖತ್ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ನೋಡೋಕೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು ಸಾಕಷ್ಟು ಮಂದಿ ಸಾನ್ಯಾ ಸೌಂದರ್ಯವನ್ನು ಹೊಗಳಿದ್ದಾರೆ.
ಇತ್ತೀಚೆಗಷ್ಟೇ ಸಾನ್ಯಾ ಐಯ್ಯರ್ ಬಾಲಿವುಡ್ನ ಖ್ಯಾತ ಫೋಟೋಗ್ರಾಫರ್ ಡಬು ರತ್ನಾನಿ ಬಳಿ ಫೋಟೋಶೂಟ್ ಮಾಡಿಸಿ ಅವುಗಳನ್ನು ಶೇರ್ ಮಾಡಿದ್ದರು. ಆ ಬೆನ್ನಲ್ಲೇ ಇದೀಗ ಮತ್ತಷ್ಟು ಫೋಟೋಗಳನ್ನು ಸಾನ್ಯಾ ಹಂಚಿಕೊಂಡಿದ್ದಾರೆ.
ಸಾನ್ಯಾ ಫೋಟೋಗಳನ್ನು ನೋಡಿದ ಜನ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಸಾಕಷ್ಟು ಮಂದಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದ ವೇಳೆ ಎದೆ ಮೇಲೆ ಕೈ ಇಟ್ಟ ಅಂತಾ ಕಿರಿಕ್ ಮಾಡಿದ್ದು ನೀನೇ ಅಲ್ವಾ ಅಂತಾ ಸಾನ್ಯ ಹಾಟ್ ಫೋಟೋಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ದೊಡ್ಮನೆಯಿಂದ ಹೊರ ಬಂದ ಮೇಲೆ ಹೇಳಿಕೊಳ್ಳುವಂತಹ ಅವಕಾಶ ಅವರಿಗೇನು ಸಿಕ್ಕಿಲ್ಲ. ಒಂದೊಳ್ಳೆಯ ಅವಕಾಶಕ್ಕಾಗಿ ನಟಿ ಎದುರು ನೋಡ್ತಿದ್ದಾರೆ.