ಸ್ಯಾಂಡಲ್ವುಡ್ ಮೋಹಕತಾರೆ ರಮ್ಯಾ ಹಾಗೂ ನಟಿ ಅಮೃತಾ ಅಯ್ಯಂಗಾರ್ ಹೊಸ ವರ್ಷ ಅದ್ದೂರಿಯಾಗಿ ಸ್ವಾಗತಿಸಲು ಲಂಡನ್ಗೆ ಹಾರಿದ್ದಾರೆ. ಇದೀಗ ರಮ್ಯಾ, ಅಮೃತಾ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟಿ ರಮ್ಯಾ ಮತ್ತೆ ನಟನೆಗೆ ಕಮ್ಬ್ಯಾಕ್ ಆಗುತ್ತಿದ್ದಾರೆ. ಚಿತ್ರರಂಗದಲ್ಲಿ ಆಕ್ಟೀವ್ ಆಗ್ತಿದ್ದಾರೆ. ಹೀಗಿರುವಾಗ ಹೊಸ ವರ್ಷ ಸಂತಸದಿಂದ ಬರಮಾಡಿಕೊಳ್ಳಲು ನಟಿ ಅಮೃತಾ ಜೊತೆ ಲಂಡನ್ಗೆ ಹಾರಿದ್ದಾರೆ. ದೂರದ ದೇಶ ಲಂಡನ್ನಲ್ಲಿ ಹೊಸ ಹೊಸ ಜಾಗಗಳಿಗೆ ಭೇಟಿ ಕೊಡುತ್ತಾ ಎಂಜಾಯ್ ಮಾಡ್ತಿದ್ದಾರೆ. ಈಗ ಲಂಡನ್ ಪ್ರವಾಸದಲ್ಲಿ ಮಸ್ತ್ ಮಜಾ ಮಾಡುತ್ತಿರುವ ಈ ಇಬ್ಬರ ನಟಿಯರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಇನ್ನೂ ರಮ್ಯಾ ಮತ್ತು ಡಾಲಿ ನಟನೆಯ `ಉತ್ತರಾಕಾಂಡ’ ಸಿನಿಮಾ 2023ರ ಜನವರಿಯಿಂದ ಶೂಟಿಂಗ್ ಶುರುವಾಗಲಿದೆ. ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.