ನ್ಯೂಜಿಲೆಂಡ್ ನ ದಕ್ಷಿಣ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ನ್ಯೂಜಿಲೆಂಡ್ನ ಜಿಯೋನೆಟ್ ಮಾನಿಟರಿಂಗ್ ಏಜೆನ್ಸಿಯ ಪ್ರಕಾರ, ಭೂಕಂಪದ ಕೇಂದ್ರವು ಭೂಮಿಯ ಮೇಲ್ಮೈಯಿಂದ 33 ಕಿಲೋಮೀಟರ್ ಕೆಳಗೆ ಇತ್ತು.
ಆದಾಗ್ಯೂ, ತಕ್ಷಣಕ್ಕೆ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ ಮತ್ತು ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ. ಭೂಕಂಪದ ಅನುಭವವಾದ ನಂತರ ಮೂಲಸೌಕರ್ಯಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಭೂಕಂಪ ವಲಯಕ್ಕೆ ಹತ್ತಿರವಿರುವ ಅತಿದೊಡ್ಡ ನಗರವಾದ ಇನ್ವರ್ಕಾರ್ಗಿಲ್ ಸಿಟಿ ಕೌನ್ಸಿಲ್ನ ಅಧಿಕಾರಿ ತಿಳಿಸಿದ್ದಾರೆ.