ಡಾಲಿ ಧನಂಜಯ್ ನಿರ್ಮಾಣ ಸಂಸ್ಥೆಯಿಂದ ರೆಡಿಯಾಗುತ್ತಿರುವ ಟಗರು ಪಲ್ಯ ಸಿನಿಮಾದ ಮೂಲಕ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಇದೀಗ ಅಮೃತ ಪ್ರೇಮ್ ಮೊದಲ ಸಿನಿಮಾಗೆ ಪಡೆದುಕೊಂಡ ಸಂಭಾವನೆ ಕುರಿತು ಗಾಂಧಿನಗರದಲ್ಲಿ ಚರ್ಚೆ ಶುರುವಾಗಿದೆ.
ಡಾಲಿ ಧನಂಜಯ್ ನಿರ್ಮಾಣದ `ಟಗರು ಪಲ್ಯ’ ಚಿತ್ರದ ಮೂಲಕ ನೆನಪಿರಲಿ ಪ್ರೇಮ್ ಮಗಳು ಅಮೃತಾ ನಟ ನಾಗಭೂಷಣಗೆ ನಾಯಕಿಯಾಗಿ ಗಾಂಧಿನಗರಕ್ಕೆ ಎಂಟ್ರಿಕೊಡ್ತಿದ್ದಾರೆ. ಸಾಮಾನ್ಯವಾಗಿ ಮೊದಲ ಚಿತ್ರಕ್ಕೆ ಅವಕಾಶ ಕೊಡುವುದೇ ದೊಡ್ಡ ವಿಚಾರ. ನಟಿಯ ಮೊದಲ ಚಿತ್ರದ ಸಂಭಾವನೆ ಕೇಳಿದ್ರೆ ಬೆಚ್ಚಿ ಬೀಳುವಂತಿದೆ. ಚೊಚ್ಚಲ ಚಿತ್ರಕ್ಕೆ ಅಮೃತಾ ಪ್ರೇಮ್ಗೆ 10 ಲಕ್ಷ ರೂ. ಸಂಭಾವನೆ ಕೊಟ್ಟಿದ್ದಾರಂತೆ ಡಾಲಿ.
ಡಾಲಿ ನಿರ್ಮಾಣದ ಮೂರನೇ ಸಿನಿಮಾ `ಟಗರುಪಲ್ಯ’ ಚಿತ್ರಕ್ಕೆ ಅಮೃತಾಗೆ 10 ಲಕ್ಷ ರೂ. ಸಂಭಾವನೆ ನೀಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ನಟನೆಯ ಯಾವುದೇ ಅನುಭವವಿಲ್ಲದ ಹೊಸ ಪ್ರತಿಭೆಗೆ ಇಷ್ಟೊಂದು ಸಂಭಾವನೆನಾ ಎಂಬ ಚರ್ಚೆ ಗಾಂಧಿನಗರದಲ್ಲಿ ಜೋರಾಗಿದೆ. ಇನ್ನೂ ತಮ್ಮ ಚೊಚ್ಚಲ ಚಿತ್ರದ ಮೂಲಕ ಅಮೃತ ಮುಂದಿನ ದಿನಗಳಲ್ಲಿ ಗಟ್ಟಿ ನಾಯಕಿಯಾಗಿ ನಿಲ್ಲುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.