ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿತ್ಯ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಆರ್ ಜಿ ವಿ ನಟಿಯೊಬ್ಬರ ಪಾದ ಹಿಡಿದು ಕುಳಿತುಕೊಂಡಿರುವ ಕಾಣಕ್ಕೆ ಮತ್ತೆ ಸುದ್ದಿಯಾಗಿದ್ದಾರೆ.
ಸಿನಿಮಾರಂಗದಲ್ಲಿ ಸ್ಟಾರ್ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ ಸಿನಿಮಾಗಿಂತ ಹೆಚ್ಚಾಗಿ ವಿವಾದದ ಮೂಲಕನೇ ಸುದ್ದಿಯಾಗುತ್ತಾರೆ. ಸದಾ ನಾಯಕಿಯರ ಮಧ್ಯೆಯೇ ಕಾಣಿಸಿಕೊಳ್ಳುವ ಆರ್ಜಿವಿ ಇದೀಗ ನಟಿಯೊಬ್ಬರ ಪಾದ ಹಿಡಿದಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫೋಟೋ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.
ಸಂದರ್ಶನವೊಂದರಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹಾಗೂ ನಟಿ ಅಶು ರೆಡ್ಡಿ ಭಾಗಿಯಾಗಿದ್ದರು. ಸಂದರ್ಶನದ ಬಳಿಕ ಅಶು ರೆಡ್ಡಿ ಅವರ ಕಾಲ ಬುಡದಲ್ಲಿ ಆರ್ಜಿವಿ ಕುಳಿತು ಆಕೆಯ ಪಾದವನ್ನು ಹಿಡಿದುಕೊಂಡಿರುವ ಫೋಟೋವನ್ನ ಆರ್ಜಿವಿ ಶೇರ್ ಮಾಡಿದ್ದು, ಫೋಟೋಗೆ ಭಾರಿ ಕಾಮೆಂಟ್ ಬರುತ್ತಿದೆ.
ಅಶು ರೆಡ್ಡಿ ಸೋಫಾದ ಮೇಲೆ ಕುಳಿತಿದ್ದಾರೆ. ಅವರ ಕಾಲ ಬಳಿ ಕುಳಿತಿರುವ ಆರ್ಜಿವಿ, ನಾನೇ ತುಂಬಾ ಡೇಂಜರಸ್ ಆದರೆ ಅಶು ರೆಡ್ಡಿ ನನಗಿಂತ ಡಬಲ್ ಡೇಂಜರಸ್ ಎಂದು ಆರ್ಜಿವಿ ಫೋಟೋ ಜತೆ ಪೋಸ್ಟ್ ಮಾಡಿದ್ದಾರೆ. ಒಟ್ನಲ್ಲಿ ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.