ಟಾಲಿವುಡ್ ನಿಂದ ಬಾಲಿವುಡ್ ಗೆ ಹಾರಿರುವ ನಟಿ ರಶ್ಮಿಕಾ ಮಂದಣ್ಣ ಹಿಟ್ ಸಿನಿಮಾಗಾಗಿ ಕಾಯ್ತಿದ್ದಾರೆ. ರಶ್ಮಿಕಾ ನಟನೆಯ ಹಿಂದಿ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸುತ್ತಿವೆ. ಆದರೂ ಬಿಟೌನ್ ನಲ್ಲಿ ನಟಿ ರಶ್ಮಿಕಾಗೆ ಇರುವ ಬೇಡಿಕೆ ಮಾತ್ರ ಕಮ್ಮಿಯಾಗಿಲ್ಲ. ಸದ್ಯ ನಟಿ ರಶ್ಮಿಕಾ ಮಂದಣ್ಣ ನಟ ರಣಬೀರ್ ಕಪೂರ್ ಜೊತೆ ಅನಿಮಲ್ ಸಿನಿಮಾದಲ್ಲಿ ನಟಿಸಿದ್ದು ಚಿತ್ರದ ಶೂಟಿಂಗ್ ಮುಗಿಸಿದ್ದಾರೆ.
ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ನಿರ್ದೇಶನದ, ರಣಬೀರ್ ಕಪೂರ್ ನಟನೆಯ ಅನಿಮಲ್ ಸಿನಿಮಾದ ಶೂಟಿಂಗ್ ಮುಗಿಸಿರುವ ರಶ್ಮಿಕಾ ಸದ್ಯ ಸಿನಿಮಾದ ಕುರಿತು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಅನಿಮಲ್ ಮುಗಿಯಿತು. ಅದ್ಭುತ ಪಾತ್ರ. ಈ ರೂಪದಲ್ಲಿ ನನ್ನನ್ನು ಯಾರೂ ನೋಡಿಲ್ಲ. ನಿರ್ದೇಶಕ ಸಂದೀಪ್ ವಂಡರ್ಫುಲ್. ರಣಬೀರ್ ಬಗ್ಗೆ ಏನು ಹೇಳಬೇಕು ? ಅಮೇಜಿಂಗ್ ಆಕ್ಟರ್. ಅಷ್ಟೇ ಒಳ್ಳೆಯ ಮನಸಿನ ಹುಡುಗ. ಅನಿಮಲ್ ನಿಮ್ಮನ್ನು ಖಂಡಿತ ರಂಜಿಸಲಿದೆ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.
ಈಗಾಗ್ಲೆ ರಶ್ಮಿಕಾ ನಟನೆಯ ಎರಡು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿವೆ. ಹೀಗಾಗಿ ಅನಿಮಲ್ ಸಿನಿಮಾದ ಮೂಲಕ ಗೆಲ್ಲಲ್ಲೇ ಬೇಕಾದ ಅನಿವಾರ್ಯತೆ ರಶ್ಮಿಕಾಗೆ ಇದೆ.