ನೀನು ಬೆಳಕು
ನಾನು ಮೂಂಬತ್ತಿ
ನಾನು ಕರಗಿದೆ
ನಮ್ಮಿಬ್ಬರ ಮೈಗೆ ಮೈ ಹತ್ತಿ
……..
ಒಮ್ಮೊಮ್ಮೆ ನೀನು
ತತ್ವಜ್ಞಾನಿ ಕವಿ
ಕೆಲವೊಮ್ಮೆ ಆಳವಾದ ಕವಿತ್ವ
ನಾನು ಮಾತ್ರ ಭವಿ
……
ಅಚಾನಕ್ಕಾಗಿಯೋ
ಕಣ್ತಪ್ಪಿನಿಂದಲೋ
ವಿಧಿಲಿಖಿತವೋ ಹೇಗೋ
ನಿನ್ನ ಆತ್ಮಸಾಂಗತ್ಯ
ನನ್ನ ಕಾಯುವಿಕೆಗೆ
ಸಂದ ಇನಾಮು
…..
ಮತಿಯ ಮಿತಿ
ಹೆಚ್ಚಿದಷ್ಟೂ ಸೈರಣೆಯ
ಮೇರೆಯೂ ಮೇರು
ನಿಜವಾದ ಪ್ರೀತಿಯ
ಗ್ರಹಿಕೆಯಾದಷ್ಟೂ ಅದಕ್ಕಾಗಿ
ಕಾಯುವ ತಾಳ್ಮೆಯೂ
…….
ಬಹುತೇಕರು ಹಿಡಿತಕ್ಕೆ
ಹಿತವೆನಿಸುವ ತೊಗಲನ್ನ
ಮಾತ್ರ ಪ್ರೀತಿಸುತ್ತಾರೆ
ಕೆಲವರು ಮಾತ್ರ
ತೊಗಲಿನಾಳದಲ್ಲಿರುವ
ಮಿಡಿತವನ್ನ
….
ಪ್ರೀತಿಯನ್ನು ಪಡೆದುದಕ್ಕಿಂತ
ಹಡೆದದ್ದೇ ಹೆಚ್ಚಾದರೂ
ಪರಿಮಳವ ಪಲ್ಲವಿಸಿದ್ದು
ಮುಂಬೆಳಕ ಚೆಲ್ಲಿದ್ದು
ತುಂಬಿಬoದ ಹಾಲುಣಿಸಿದ್ದು
ಹೆಚ್ಚು ತೃಪ್ತಿಕರ